ಕನ್ನಡತಿ ಎನ್ನೊಡತಿ

ಪಿ. ಬಿ. ಶ್ರೀನಿವಾಸ್ ಆರ್. ಎನ್. ಜಯಗೋಪಾಲ್ ದುಲಾಲ್ ಸೇನ್

ಕನ್ನಡತಿ ಎನ್ನೊಡತಿ

ಕಣ್ಣು ತೆರೆದು ನೋಡು

ನೀ ನಮಗೆ ವರವ ನೀಡು

ಕೈ ಮುಗಿವೆ ಭೂಮಿ ತಾಯೆ

ನಿನ್ನ ಮಣ್ಣ ಮಕ್ಕಳನು ಸಲಹು ತಾಯೆ || ಪ ||

ಮುಂಗಾರು ಮಳೆಯಾಗಿದೆ

ಬಯಲುಗಳ ಸೀಮೆಯಲಿ

ಕೆರೆ ತುಂಬಿ ತುಳುಕಾಡಿದೆ

ನಸು ನಗುತ ನಲಿವಿನಲಿ

ಕರೆ ನೀಡಿದೆ ದುಡಿ ಎಂದಿದೆ

ನೀ ದುಡಿ ಎಂದಿದೆ

ಉಳುವ ರೈತ ನಾನು

ಫಲವ ನೀವೆ ನೀನು || 1 ||

ನಮ್ಮ ಕುಲದ ದೈವ ನೀನು

ನಿನ್ನ ಹೆಸರ ಹೇಳಿ

ಬೆಳಕ ಹಚ್ಚುವೆ ನಾನು

ನಮ್ಮ ಕುಲದ ದೈವ ನೀನು

ನಿನ್ನ ಹೆಸರ ಹೇಳಿ

ನೇಗಿಲ ಹೂಡುವೆ ನಾನು

ನಮ್ಮ ಕುಲದ ದೈವ ನೀನು

ನಿನ್ನಿಂದಲೇ ಜನಿಸಿದೆನಾ ಬೆಳೆದಿಹೆನಾ

ದುಡಿವೆವು ನಿನಗಾಗಿ

ಮಡಿವೆವು ನಿನಗಾಗಿ || ೨ ||